| |
 |
 |
Welcome Guest
Date:2010/09/05 |
 |
 |
|
|
|
|
|
|
|
|
Kannada News |
ನಕ್ಸಲರಿಂದ ಪೊಲೀಸರ ಬಿಡುಗಡೆ; ಮುಂದುವರಿದ ನಿಗೂಢತೆ :ಪಾಟ್ನಾ: ಅಪಹರಣಕ್ಕೊಳಗಾಗಿರುವ ಪೊಲೀಸ್ ಸಿಬ್ಬಂದಿಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಮಾವೋವಾದಿಗಳು ಹೇಳಿಕೊಂಡಿದ್ದರೂ, ಈ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಇದರೊಂದಿಗೆ ಪೊಲೀಸರ ಸ್ಥಿತಿ-ಗತಿ ಕುರಿತ ಆತಂಕ ಕಡಿಮೆಯಾಗುವ ಯಾವುದೇ ಸಂಭವನೀಯತೆಗಳು ಕಾಣದೆ ನಿಗೂಢತೆಯೇ ಮುಂದುವರಿದಿದೆ.    Click to read complete description
ಭಾರತದ ಬ್ರಹ್ಮೋಸ್ ನೂತನ ಕ್ಷಿಪಣಿ ಪರೀಕ್ಷೆ ಯಶಸ್ವಿ :ಬಾಲಾಸೋರ್: 290 ಕಿಲೋ ಮೀಟರ್ ವ್ಯಾಪ್ತಿ ಸಾಮರ್ಥ್ಯದ ಸೂಪರ್ ಸಾನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾನುವಾರ ಭಾರತವು ಯಶಸ್ವಿಯಾಗಿ ಪೂರೈಸಿದೆ.
ಭಯೋತ್ಪಾದಕರ ಅಡಗುದಾಣಗಳ ಮೇಲಿನ ದಾಳಿ ಸೇರಿದಂತೆ ಇತರೆಡೆಗೆ ಹಾನಿಯಾಗದಂತೆ ಗುರಿಯನ್ನು ನಿಖರವಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಯನ್ನು ಒರಿಸ್ಸಾದ ಕರಾವಳಿಯಲ್ಲಿನ ಚಾಂದಿಪುರ್ ಸಮಗ್ರ ಪರೀಕ್ಷಾರ್ಥ ವಲಯದಿಂದ ಭಾರತೀಯ ರಕ್ಷಣಾ ಪಡೆಯು ಉಡಾಯಿಸಿತು.    Click to read complete description
ದೇವೇಗೌಡರಿಂದ ಸಂವಿಧಾನ ವಿರೋಧಿ ನೀತಿ: ಆಚಾರ್ಯ :ಗುಲ್ಬರ್ಗ: ಗೋಹತ್ಯೆ ನಿಷೇಧ ಕಾಯಿದೆ ವಿರೋಧಿಸುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಕಟುವಾಗಿ ಟೀಕಿಸಿದರು.
ಭಯೋತ್ಪಾದನೆಗೆ ಹೆಸರಾದ ಜಮ್ಮು-ಕಾಶ್ಮೀರದಲ್ಲಿ ಗೋಹತ್ಯೆ ಮಾಡಿದರೆ 10 ವರ್ಷ ಜೈಲು ಶಿಕ್ಷೆ ಇದೆ. ಆದರೆ ಈ ಕಾನೂನು ಕರ್ನಾಟಕದಲ್ಲಿ ಜಾರಿಯಾದರೆ ತಪ್ಪೇನು? ಎಲ್ಲದರಲ್ಲೂ ರಾಜಕೀಯ ಬೆರೆಸಬಾರದು ಎಂದು ಕಿವಿಮಾತು ಹೇಳಿದರು.    Click to read complete description
ಸಿಎಂರದ್ದು ರಾಜಕೀಯ ಹಗೆತನ, ದ್ವೇಷದ ಪ್ರವೃತ್ತಿ: ಯತ್ನಾಳ್ :ಗುಲ್ಬರ್ಗ: ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಎಂದಿನ ರಾಜಕೀಯ ಹಗೆತನ, ದ್ವೇಷದ ಪ್ರವೃತ್ತಿ ಮುಂದುವರಿಸಿದ್ದಾರೆ ಎಂದು ಕೇಂದ್ರದ ಮಾಜಿ ಮಂತ್ರಿ, ಜೆಡಿಎಸ್ ನಾಯಕ ಬಸವರಾಜ ಪಾಟೀಲ ಯತ್ನಾಳ ಕಿಡಿಕಾರಿದರು.
ಮುಖ್ಯಮಂತ್ರಿಯವರ ರಾಜಕೀಯ ಹಗೆತನಕ್ಕೆ ಮಲ್ಲಿಕಾರ್ಜುನಯ್ಯ, ಬಿ.ಬಿ. ಶಿವಪ್ಪ, ಬಸವರಾಜ ಪಾಟೀಲ ಸೇಡಂ ಹಾಗೂ ತಾವು ಬಲಿಯಾಗಿದ್ದು, ಈಗ ಇಂಥದ್ದೇ ಮತ್ತೊಂದು ತಾಜಾ ಉದಾಹರಣೆ ರೇವೂರ ಕುಟುಂಬ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು.    Click to read complete description
ಕಾಮನ್ವೆಲ್ತ್ ಭಾರತೀಯರಿಗೆ ಹೆಮ್ಮೆಯ ಸಂಗತಿ: ಬಚ್ಚೇಗೌಡ :ಹಾಸನ: ರಾಷ್ಟ್ರದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಭ್ರಾತೃತ್ವ ನಿರ್ಮಿಸುವಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ ಮಹತ್ವದ ಪಾತ್ರ ವಹಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎನ್.ಬಚ್ಚೇಗೌಡ ಹಾರೈಸಿದ್ದಾರೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಕಾಮನ್ವೆಲ್ತ್ ಕ್ವೀನ್ಸ್ ಬ್ಯಾಟನ್ ಕ್ರೀಡಾಜ್ಯೋತಿ ಸ್ವಾಗತಿಸುವ ಸಲುವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಕಾಮನ್ವೆಲ್ತ್ ಕ್ರೀಡಾಕೂಟ ದಿಲ್ಲಿಯಲ್ಲಿ ನಡೆಯುತ್ತಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿ ಎಂದರು.    Click to read complete description
ಆದೇಶ ಪಾಲಿಸದಿದ್ದರೆ ಕಠಿಣ ಕ್ರಮ: ಮುಮ್ತಾಜ್ ಅಲಿ ಖಾನ್ :ಬಾಗೇಪಲ್ಲಿ: ನನ್ನ ಆದೇಶಗಳನ್ನು ಪಾಲಿಸದ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರೊ. ಮುಮ್ತಾಜ್ ಅಲಿ ಖಾನ್ ಎಚ್ಚರಿಸಿದರು.
ಇಲ್ಲಿನ ಸಂತೆ ಮೈದಾನದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಮಾತನಾಡಿ, ಚುನಾವಣೆ ಸಮಯಕ್ಕೆ ಮಾತ್ರ ರಾಜಕೀಯವನ್ನು ಸೀಮಿತಗೊಳಿಸಿ ನಂತರ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಅಭಿವೃದ್ದಿ ಕಡೆ ಗಹನಹರಿಸಬೇಕು. ನಾನು ಮೃದು ಎಂಬ ಕಾರಣಕ್ಕೆ ಯಾವುದೇ ಆದೇಶ ನೀಡಿದರೂ ಕನಿಷ್ಠ ವರದಿಯನ್ನು ಸಹ ಅಧಿಕಾರಿಗಳು ಸಲ್ಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ನನ್ನ ಅದೇಶ ಮೀರಿದ ಅಧಿಕಾರಿಗಳು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗುಡುಗಿದರು.    Click to read complete description
ಕೌಶಲ ಅಭಿವೃದ್ದಿ ಕೇಂದ್ರಕ್ಕೆ ಸೆ.15ರಂದು ಚಾಲನೆ: ಮೊಯ್ಲಿ :ಗೌರಿಬಿದನೂರು: ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಸೆ.15 ರಂದು ನಡೆಯಲಿರುವ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ 150ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ತ್ರೀಯ ಕೌಶಲ ಅಭಿವೃದ್ದಿ ಕೇಂದ್ರಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದರು.    Click to read complete description
ಮುಖ ಪರದೆಯಿಲ್ಲದ ಭಾವಚಿತ್ರಕ್ಕೂ ಇರಾನ್‌ನಲ್ಲಿ ಛಡಿಯೇಟು! :ಪ್ಯಾರಿಸ್: ವ್ಯಭಿಚಾರಕ್ಕಾಗಿ ಕಲ್ಲು ಹೊಡೆದು ಸಾಯಿಸಬೇಕು ಎಂದು ಸಕೀನೇಹ್ ಮೊಹಮ್ಮದಿ ಅಸ್ತಿಯಾನಿ ಎಂಬ ಮಹಿಳೆಗೆ ಶಿಕ್ಷೆ ಘೋಷಿಸಿದ್ದ ಇರಾನ್, ಇದೀಗ ಮುಖ ಪರದೆಯಿಲ್ಲದೆ ಭಾವಚಿತ್ರ ಪ್ರಕಟವಾಗಿರುವುದಕ್ಕೆ 99 ಛಡಿಯೇಟುಗಳ ಶಿಕ್ಷೆಯನ್ನು ನೀಡಲು ಮುಂದಾಗಿದೆ.
ಆಕೆಯ ಜತೆಗಿದ್ದ ಕೈದಿಗಳು ಇದನ್ನು ತಿಳಿಸಿದ್ದಾರೆಂದು ಸಕೀನೇಹ್ ಪುತ್ರ ಸಜ್ಜದ್ ಫ್ರೆಂಚ್ ಪತ್ರಿಕೆಗಳಿಗೆ ಇದನ್ನು ಬಹಿರಂಗಪಡಿಸಿದ್ದಾನೆ.    Click to read complete description
ವಿರೋಧ ಪಕ್ಷಗಳಿಗೆ ಗೋವಿನ ಶಾಪ ತಟ್ಟಲಿದೆ: ಈಶ್ವರಪ್ಪ :ಬೆಂಗಳೂರು: ರಾಜ್ಯ ಸರಕಾರ ಜಾರಿಗೊಳಿಸಲು ಯತ್ನಿಸುತ್ತಿರುವ ಗೋಹತ್ಯಾ ವಿಧೇಯಕವನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಪ್ರತಿಪಕ್ಷಗಳು ಗೋವಿನ ಶಾಪದಿಂದ ನಿರ್ನಾಮವಾಗುವ ಸ್ಥಿತಿಗೆ ತಲುಪಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಗೋಹತ್ಯೆ ನಿಷೇಧ ಕಾನೂನಿಗೆ ಒಪ್ಪಿಗೆ ಸೂಚಿಸುವಂತೆ ಒತ್ತಾಯಿಸಿ ಬಿಜೆಪಿ ಶಿವಮೊಗ್ಗದಲ್ಲಿ ನಡೆಸಿದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಭಾಷಣದುದ್ದಕ್ಕೂ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.    Click to read complete description
ಮೋದಿ ವಿರುದ್ಧ ಸಾಕ್ಷಿ ಹೇಳಬೇಡಿ: ಮಾಜಿ ಸಚಿವಗೆ ಆರೆಸ್ಸೆಸ್ :ಅಹಮದಾಬಾದ್: ಗೋದ್ರಾ ಗಲಭೆಯ ಕುರಿತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಸುಪ್ರೀಂ ಕೋರ್ಟ್ ನೇಮಿಸಿರುವ ಸಿಟ್ ತನಿಖಾ ತಂಡದೆದುರು ಸಾಕ್ಷ್ಯ ನುಡಿಯದಂತೆ ಮಾಜಿ ಗೃಹಸಚಿವ ಗೋರ್ಧನ್ ಝಡಾಫಿಯಾ ಮನವೊಲಿಸಲು ಹಲವು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರು ಯತ್ನಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.    Click to read complete description
ಸ್ಫೋಟ: ಸಾವಿನ ಸಂಖ್ಯೆ 65 :ಇಸ್ಲಾಮಾಬಾದ್: ಪಾಕಿಸ್ತಾನದ ಕ್ವೆಟ್ಟಾ ನಗರದಲ್ಲಿ ತೆಹ್ರೀಕ್ ಇ ತಾಲಿಬಾನ್ ಉಗ್ರಗಾಮಿ ಸಂಘಟನೆ ಶುಕ್ರವಾರ ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 65ಕ್ಕೆ ಏರಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.    Click to read complete description
ಒಬಾಮಾ-ಆಂಡರ್ಸ್ ಭೇಟಿ :ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿನ ಸ್ಥಿತಿಗತಿಗಳ ಕುರಿತು ನ್ಯಾಟೋ ಪ್ರಧಾನ ಕಾರ್ಯದರ್ಶಿ ಆಂಡರ್ಸ್ ಫೋಗ್ ರಾಸ್‌ಮುಸ್ಸೆನ್ ಅವರನ್ನು ಸೆಪ್ಟೆಂಬರ್ 7ರಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭೇಟಿಯಾಗಿ ಮಾತುಕತೆ ನಡೆಸಿಲಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.    Click to read complete description
ಮಳೆ ಮುಂದುವರಿದರೆ ತಮಿಳುನಾಡಿಗೆ ನೀರು: ಯಡಿಯೂರಪ್ಪ :ನಾಗಪಟ್ಟಿಣಂ: ರಾಜ್ಯದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮತ್ತಷ್ಟು ದಿನ ಮಳೆ ಉತ್ತಮವಾಗಿ ಮುಂದುವರಿದಲ್ಲಿ ನೆರೆರಾಜ್ಯ ತಮಿಳುನಾಡಿಗೆ ನೀರು ಬಿಡಲಾಗುತ್ತದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಪ್ರಸಕ್ತ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಅತ್ಯುತ್ತಮ ಮಳೆ ಬೀಳುತ್ತಿದೆ. ಇದೇ ರೀತಿ ಕೆಲವು ದಿನಗಳ ಕಾಲ ಮುಂದುವರಿದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಬಗ್ಗೆ ನಾವು ಪರಿಗಣಿಸುತ್ತೇವೆ ಎಂದು ನಾಗಪಟ್ಟಿಣಂನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು.    Click to read complete description
ಬೆಂಗಳೂರಿನ ಈ ಹುಡುಗಿಗೆ ಇಪ್ಪತ್ತಲ್ಲ, 27 ಬೆರಳುಗಳು..! :ಬೆಂಗಳೂರು: ಕೈ ಅಥವಾ ಕಾಲುಗಳಲ್ಲಿ ಐದಕ್ಕಿಂತ ಹೆಚ್ಚು ಬೆರಳು ಹೊಂದಿದವರನ್ನು ಅದೃಷ್ಟವಂತರು ಎಂದು ಹೇಳುವುದೂ ಇದೆ. ಆದರೆ ಬೆಂಗಳೂರಿನ ಬಾಲಕಿಯೊಬ್ಬಳಿಗೆ ಬರೋಬ್ಬರಿ 27 ಬೆರಳುಗಳಿವೆ. ಆಕೆಯ ಪಾಲಿಗೆ ಅದು ಅದೃಷ್ಟವಾಗುವ ಬದಲು ಕಂಟಕವಾಗಿ ಪರಿಣಮಿಸಿದೆ. ಯಾವುದೇ ಕೆಲಸವನ್ನೂ ನೆಟ್ಟಗೆ ಮಾಡಲು ಸಹಾಯ ಮಾಡಬೇಕಾಗಿದ್ದ ಬೆರಳುಗಳೇ ಅಡ್ಡ ಬರುತ್ತಿವೆ.    Click to read complete description
'ಸೋನಿಯಾ ಪ್ರಶ್ನಿಸಲು ಕಾಂಗ್ರೆಸ್‌ನಲ್ಲಿ ಗಂಡಸರೇ ಇಲ್ಲವೇ?' :ಮುಂಬೈ: ದಾಖಲೆಯ ನಾಲ್ಕನೇ ಬಾರಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ಪುನರಾಯ್ಕೆಯಾದ ನಂತರ ಸೋನಿಯಾ ಗಾಂಧಿಯವರ ವಿದೇಶಿ ಮೂಲವನ್ನು ಮತ್ತೆ ಕೆದಕಿರುವ ಶಿವಸೇನೆ, 'ಗಾಂಧಿ' ಕುಟುಂಬಕ್ಕೆ ಸವಾಲೊಡ್ಡುವ ಗಂಡಸರೇ ಪಕ್ಷದಲ್ಲಿಲ್ಲವೇ ಎಂದು ಪ್ರಶ್ನಿಸಿದೆ.
ಶಿವಸೇನೆ ಮುಖವಾಣಿ 'ಸಾಮ್ನಾ'ದಲ್ಲಿ ಬರೆದಿರುವ ಸಂಪಾದಕೀಯದಲ್ಲಿ ಬಾಳಾ ಠಾಕ್ರೆಯವರು ಸೋನಿಯಾ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿದ್ದಾರೆ.    Click to read complete description
ಅಫ್ಘಾನ್: ಉಗ್ರರು ಬಲಿ :ಕಾಬೂಲ್: ಉತ್ತರ ಅಫ್ಘಾನಿಸ್ತಾನದಲ್ಲಿನ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿದ್ದು, ತಾಲಿಬಾನ್ ಕಮಾಂಡರ್‌ನೊಬ್ಬನನ್ನು ಸೆರೆ ಹಿಡಿದಿರುವುದಾಗಿ ನ್ಯಾಟೋ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ದಾಳಿಯಲ್ಲಿ ಆರು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ.    Click to read complete description
ನೇಪಾಳ: ಪಿಎಂ ಚುನಾವಣೆ :ಕಾಠ್ಮಂಡು: ನೇಪಾಳ ನೂತನ ಪ್ರಧಾನಿ ಆಯ್ಕೆಗಾಗಿ ನಡೆಯುತ್ತಿರುವ ಆರನೇ ಸುತ್ತಿನ ಚುನಾವಣೆ ಭಾನುವಾರ ನಡೆಯಲಿದೆ. ಕಳೆದ ಐದು ಬಾರಿಯ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವಲ್ಲಿ ಮಾವೋ ಅಭ್ಯರ್ಥಿ ಪ್ರಚಂಡ ಹಾಗೂ ಪ್ರತಿಸ್ಪರ್ಧಿ ನೇಪಾಳಿ ಕಾಂಗ್ರೆಸ್ ಅಭ್ಯರ್ಥಿ ಪೌಡ್ಯಾಲ್ ವಿಫಲರಾಗಿದ್ದರು.    Click to read complete description
ಶಾಂತಿ ಭಂಗ ಯತ್ನ :ರಾಟ್ಲಮ್: ಧಾರ್ಮಿಕ ಸ್ಥಳವನ್ನು ಅಪವಿತ್ರಗೊಳಿಸಿದ ನಂತರ ಉದ್ಭವಿಸಿರುವ ಗಲಭೆಯಿಂದಾಗಿ ಮಧ್ಯಪ್ರದೇಶದ ರಾಟ್ಲಮ್‌ನಲ್ಲಿನ ಎರಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಹೇರಲಾಗಿದೆ. ಧಾರ್ಮಿಕ ಕೇಂದ್ರವೊಂದರ ಆವರಣದಲ್ಲಿ ಅಪರಿಚಿತ ವ್ಯಕ್ತಿಗಳು ಸಗಣಿ ಎಸೆದ ನಂತರ ಇಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿತ್ತು.    Click to read complete description
ಪ್ರತಿಭಟನೆಗೆ ವಿರೋಧ :ಶ್ರೀನಗರ: ಪ್ರತ್ಯೇಕತಾವಾದಿಗಳು ನೀಡಿರುವ ಪ್ರತಿಭಟನೆ ಕರೆಗೆ ಶನಿವಾರ ಜನತೆ ಪ್ರತಿರೋಧ ವ್ಯಕ್ತಪಡಿಸಿದ ನಂತರ ಕಾಶ್ಮೀರ ಕಣಿವೆಯಲ್ಲಿ ಪರಿಸ್ಥಿತಿ ಸಾಮಾನ್ಯತೆಯತ್ತ ಮರಳುತ್ತಿದೆ. ಬಹುತೇಕ ಎಲ್ಲಾ ಕಡೆ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ.    Click to read complete description
ಮೋದಿ ಬೇಕು-ಬೇಡ, ಯಾಕೆ ಹೀಗೆ?; ನಿತೀಶ್‌ಗೆ ರಾಹುಲ್ :ಸಹರ್ಸಾ: ಬಿಜೆಪಿ ಮತ್ತು ಗುಜರಾತ್ ಮುಖ್ಯಮಂತ್ರಿಯವರೊಂದಿಗೆ ಸಂಬಂಧ ಹೊಂದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಒಮ್ಮೆ ನರೇಂದ್ರ ಮೋದಿ ಬೇಕು, ಮತ್ತೊಮ್ಮೆ ಬೇಡ; ಇದು ಯಾಕೆ ಎಂದು ಪ್ರಶ್ನಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ರಾಷ್ಟ್ರೀಯ ಜನತಾದಳ ಮುಖಂಡನಿಗೆ ಎರಡು ಮುಖವಿದೆ ಎಂದು ಟೀಕಿಸಿದ್ದಾರೆ.    Click to read complete description
|
|
|
| |
Fatal error: Cannot redeclare readmyfile() (previously declared in /home/eezysms/public_html/veezy/rssfeeds/unhtml.php:12) in /home/eezysms/public_html/veezy/inc/horizmessage.php on line 23
| | | | |